Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಕನ್ನಡ ನುಡಿ


ಬ್ಲಾಗ್ಸ್ (5)
ಹೌದು, ಇದು ತೀರಾ ಇತ್ತೀಚಿನ ಬೆಳವಣಿಗೆ. ಅಂತರ್ಜಾಲದಲ್ಲಿ ಕನ್ನಡ ಬೆಳಗುತ್ತಿದೆ. ಬ್ಲಾಗುಗಳ ಬೆಳವಣಿಗೆಯನ್ನೇ ನೋಡಿ. ಒಂದು ವರ್ಷದ ಹಿಂದೆ ಕೇವಲ ಎರಡಂಕೆಯಷ್ಟಿದ್ದ ಬ್ಲಾಗುಗಳ ಸಂಖ್ಯೆ ಈಗ 700ಕ್ಕೂ ಮಿಕ್ಕಿದೆ. ಅದು ಒತ್ತಟ್ಟಿಗಿರಲಿ, ಕನ್ನಡದ ಜಾಲ ತಾಣಗಳು ಕೂಡ ಹೆಚ್ಚಾಗುತ್ತಲೇ ಇವೆ. ಇದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿ. ಮತ್ತಷ್ಟು ಓದಿ

ಹೌದು… ‘ಕನ್ನಡ ಉಳಿಸಿ, ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ, ಅವರಿಗೆ ಸುಮ್ಮನಿರಲಾಗುವುದಿಲ್ಲವೇ’ ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ. ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು, ದಾಂಧಲೆ ಮಾಡಿದರು ಎಂಬೆಲ್ಲಾ ವರದಿಗಳನ್ನೂ ಓದುತ್ತಾ ಬಂದಿದ್ದೇವೆ. ಕರ್ನಾಟಕದಲ್ಲಿ ಕನ್ನಡಕ್ಕೆ ಅನ್ಯಾಯ ಆದಾಗ ಜನರು ಧ್ವನಿಯೆತ್ತುವುದು ಸಹಜವೇ. ಆದರೆ ಆಕ್ರೋಶವನ್ನೆಲ್ಲಾ ಅವುಡುಗಚ್ಚಿ ಸುಮ್ಮನೆ ಕುಳಿತರೆ ಅದು ಅಪಾಯಕಾರಿಯೇ. ಯಾವಾಗ ಈ ರೋಷದ ಕಟ್ಟೆ ಉಕ್ಕಿ ಒಡೆಯುದು ಧುಮ್ಮಿಕ್ಕುವುದೋ ಎಂಬುದನ್ನು ಊಹಿಸುವುದು ಅಸಾಧ್ಯವೇ ಮತ್ತಷ್ಟು ಓದಿ

ಎಲ್ಲೆಡೆ ಹ್ಯಾಪಿ ನ್ಯೂ ಇಯರ್ ಅನ್ನೋ ಪದಪುಂಜ ಕೇಳಿಬರುತ್ತಿದೆ. ಅಪ್ಪಿ ತಪ್ಪಿಯೂ “ಹೊಸ ವರುಷದ ಶುಭಾಶಯಗಳು” ಅನ್ನುವ ಮಾತು ಕೇಳಿಬರುವುದಿಲ್ಲ. (ಬೇಕಿದ್ದರೆ ಈಗೀಗ ಕನ್ನಡ ಶುಭಾಶಯ ಪತ್ರಗಳಲ್ಲಿ ಓದುತ್ತೇವಷ್ಟೇ). ಇದು ಪ್ರತಿವರ್ಷದ ಜನವರಿ ತಿಂಗಳ ಮೊದಲ ವಾರವಿಡೀ ಅಲ್ಲಲ್ಲಿ ಗುನುಗುತ್ತಿರುತ್ತೇವೆ ಮತ್ತು ಅಂತರ್ಜಾಲದಲ್ಲಿ ಹೊಸ ವರ್ಷಕ್ಕೆ ಸಂಬಂಧಿಸಿದ ಶುಭಾಶಯ ಪತ್ರಗಳು ಹರಿದಾಡುತ್ತಲೇ ಇರುತ್ತವೆ. ಮತ್ತಷ್ಟು ಓದಿ

ಮೂಡುಬಿದಿರೆಯ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹೊಸ ಸಾಧ್ಯತೆಗೆ ನಾಂದಿ ಹಾಡಿತು. ಆಳ್ವಾಸ್ ನುಡಿಸಿರಿಯಲ್ಲಿ ಕದ್ರಿ ನವನೀತ್ ಶೆಟ್ಟಿ ಪರಿಕಲ್ಪನೆಯಲ್ಲಿ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ, ದೇರಾಜೆ ಸೀತಾರಾಮಯ್ಯನವರ “ಕುರುಕ್ಷೇತ್ರಕ್ಕೊಂದು ಆಯೋಗ” ಕೃತಿ ಮಹಾಭಾರತದ ಜ್ಞಾನವುಳ್ಳವರಿಗೆ ಸಂಪೂರ್ಣ ಅರ್ಥವಾಗುವಂತಿತ್ತು, ಮತ್ತು ಅರೆ ಬರೆಯಾಗಿ ಗೊತ್ತಿರುವ ಮಂದಿಗೆ ಮಹಾಭಾರತದ ಪಾತ್ರಗಳ ಒಳಸಂವೇದನೆ, ತಪ್ಪು ಒಪ್ಪುಗಳ ಆಂತರಿಕ ತಾಕಲಾಟ, ತಪ್ಪೆಂದು ತಿಳಿದಿದ್ದೂ ಅದನ್ನು ಮಾಡಲೇಬೇಕಾಗಿದ್ದ ಅನಿವಾರ್ಯತೆಗಳೆಲ್ಲವನ್ನೂ ಬಿಚ್ಚಿಡುವಲ್ಲಿ, ಮಾತ್ರವಲ್ಲದೆ, ಕುರುಕ್ಷೇತ್ರ ಯುದ್ಧದ ಸೂತ್ರದಾರಿ ಶ್ರೀಕೃಷ್ಣ ಕೆಲವೆಡೆ ಕಪಟವಾಡಿದ್ದಾನೆ, ಅದು ಯಾಕೆ ಕಪಟವಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಲು ಯತ್ನಿಸುವ ನಿಟ್ಟಿನಲ್ಲಿ ಈ ಯಕ್ಷರಂಗ ಪ್ರಯೋಗ ಪ್ರಯತ್ನಿಸಿತು. ಮತ್ತಷ್ಟು ಓದಿ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು. ಮತ್ತಷ್ಟು ಓದಿ