Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಕನ್ನಡ ದೇಶ


ಬ್ಲಾಗ್ಸ್ (8)
ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮುಂತಾದವುಗಳು ಪಟಾಕಿ ಉದ್ಯಮದ ಮೇಲೂ ಗಾಢ ಪ್ರಭಾವ ಬೀರಿರುವುದರೊಂದಿಗೆ ಈ ಬಾರಿ ದೀಪಾವಳಿಯಲ್ಲಿ ಪಟಾಕಿಗಳು ಹೆಚ್ಚು ಸದ್ದು ಮಾಡಲಾರವು. ಕಳೆದ ಬಾರಿಗೆ ಹೋಲಿಸಿದರೆ ಪಟಾಕಿಗಳ ಬೆಲೆ ಸುಮಾರು ಶೇ.35ರಷ್ಟು ಏರಿಕೆ ಕಂಡಿವೆ. ಆದರೂ, ವಿಶೇಷವಾಗಿ ತಮಿಳುನಾಡಿನಲ್ಲಿ ಶಬ್ದ ಮಾಲಿನ್ಯದ ಮೇಲೆ ... ಮತ್ತಷ್ಟು ಓದಿ

'ಕನ್ನಡ ಉಳಿಸಿ, ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ, ಅವರಿಗೆ ಸುಮ್ಮನಿರಲಾಗುವುದಿಲ್ಲವೇ' ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ. ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು, ದಾಂಧಲೆ ಮಾಡಿದರು ಎಂಬೆಲ್ಲಾ ವರದಿಗಳನ್ನೂ ಓದುತ್ತಾ ಬಂದಿದ್ದೇವೆ. ಮತ್ತಷ್ಟು ಓದಿ

ಹೌದಲ್ವಾ? ನನ್ನ ಅಕ್ಕ ಪಕ್ಕದ ಮನೆಯಲ್ಲಿ ನನ್ನ ವಯಸ್ಸಿನ ಹುಡುಗ್ರು ಯುಗಾದಿಯಂದು, ವಿಷು ಕಣಿ ನೋಡಿ ಹೊಸ ಬಟ್ಟೆ ತೊಟ್ಟು ನಲಿದಾಡುವುದಕ್ಕೆ, ಅವರ ಫ್ರೆಂಡ್ಸಿಗೆಲ್ಲಾ ತೋರಿಸೋದಿಕ್ಕೆ ಎಷ್ಟೊಂದು ಸಂಭ್ರಮದಲ್ಲಿದ್ದಾರೆ! ಸಡಗರ, ಪುಳಕ, ಮನಸ್ಸಿನ ತುಂಬಾ ಹೊಸ ಅಂಗಿ ಚಡ್ಡಿಯ ಕನಸು... ಯುಗಾದಿಗೆ ಒಂದು ವಾರ ಇರುವಾಗಲೇ ಅವರ ಕಣ್ಣುಗಳಲ್ಲದೇನು ಹೊಳಪು! ನಾನು ಯೋಚಿಸಿಕೊಳ್ಳುತ್ತೇನೆ... ಈ ಹಬ್ಬ ಅಂದ್ರೇನು? ಬೆಂದ ಅನ್ನಕ್ಕೇ ಒಂದಷ್ಟು ಬೆಲ್ಲ ಹಾಕಿ, ತೆಂಗಿನ ಕಾಯಿ ಇದ್ದರೆ ಅದನ್ನು ಅರೆದು ಹಾಲು ತೆಗೆದು, ಅದನ್ನೂ ಸೇರಿಸಿದರೆ ಒಂದು ಮಧ್ಯಾಹ್ನದೂಟಕ್ಕೆ ಅರ್ಧ ಲೋಟದಲ್ಲಿ ಪಾಯಸ ಎಂಬ ಸಿಹಿ ಪದಾರ್ಥ ತಿಂದರೆ ಅದೇ ಹಬ್ಬವಾಗಿಬಿಡುತ್ತಿತ್ತು ನನಗೆ. ಹೊಸ ಅಂಗಿ-ಚಡ್ಡಿಯ ಬಗ್ಗೆ ನಾನಂತೂ ಕನಸು ಕಂಡದ್ದಿಲ್ಲ, ಕಾಣುವಂತೆಯೂ ಇರಲಿಲ್ಲ. ಮತ್ತಷ್ಟು ಓದಿ

'ನಿನ್ನನ್ನು ಬೇರೆ ಯಾರಾದರೂ ನೋಡಿದರೆ ಹೊಟ್ಟೆ ಉರಿಯುತ್ತದೆ. ಭಾರೀ ಕಷ್ಟಪಟ್ಟು ನನ್ನ ಹೃದಯವನ್ನು ನಾನು ಸಮಾಧಾನ ಮಾಡಿಕೊಳ್ಳುತ್ತೇನೆ.' ಹೌದು, ಹೆಚ್ಚಿನವರ ಪ್ರೇಮ-ಪ್ರೀತಿಯಲ್ಲಿ ಇದೇ ಪರಿಸ್ಥಿತಿ ಇರುತ್ತದೆ. ನನ್ನ ಪ್ರೀತಿ ನನಗೆ ಮಾತ್ರವೇ, ಕೇವಲ ನನಗಾಗಿ ಇರಬೇಕು ಅಂತ ಹಪಹಪಿಸುತ್ತದೆ ಮನಸ್ಸು. ಅವಳು/ನು ಬೇರೆಯವರೊಡನೆ ನಗು ನಗುತ್ತಾ ಮಾತನಾಡಿದರಂತೂ ಅಷ್ಟೇ. ಮುಗಿದೇ ಹೋಯಿತು. ಅವಳನ್ನು ಕೊಂದೇಬಿಡುವಷ್ಟು ಕೆಟ್ಟ ಕೋಪ. ಮತ್ತಷ್ಟು ಓದಿ

ಯಾಹೂವನ್ನು ಖರೀದಿಸಲು ಮೈಕ್ರೋಸಾಫ್ಟ್ ಮುಂದಾಗಿದೆಯಂತೆ. ಅಂತರ್ಜಾಲ ಜಗತ್ತಿನ ದೈತ್ಯ ಶಕ್ತಿಗಳ ನಡುವಣ ಕದನ ಮತ್ತೊಂದು ಮುಖ ಹೊರಳಿಸಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವಣ ಕದನ ಕ್ರಾಂತಿಕಾರಿ ರೂಪ ತಾಳುತ್ತಿದ್ದು, ಇದೀಗ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ ಪ್ರಕಾರ, ಯಾಹೂವನ್ನು 44.6 ಶತಕೋಟಿ ಡಾಲರ್ ನೀಡಿ ಖರೀದಿಸಲು ಮೈಕ್ರೋಸಾಫ್ಟ್ ಸಂಸ್ಥೆ ಮುಂದಾಗಿದೆ. ಮತ್ತಷ್ಟು ಓದಿ

ಹಾಸಿಗೆಯಲ್ಲಿ ಮೈಯೊಡ್ಡಿ ಮಾತನಾಡುತ್ತಾ ಕಾಲ ಕಳೆಯುವುದು ಒಳ್ಳೆಯದೂಂತ ಅನಿಸಬಹುದು. ಆದರೆ ನಿದ್ದೆ ಹೋಗುವ ಮುನ್ನ ಮೊಬೈಲ್‌ನಲ್ಲಿ ಮಾತನಾಡುವುದಿದೆಯಲ್ಲ... ಅದು ಡೇಂಜರ್! ನಿದ್ರಿಸುವ ಮುನ್ನ ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಾ ಇದ್ದರೆ, ಹ್ಯಾಂಡ್‌ಸೆಟ್‌ನಿಂದ ಹೊರಸೂಸುವ ವಿಕಿರಣಗಳು ನಿದ್ರಾಹೀನತೆ ಮತ್ತು ತಲೆನೋವು ತಂದೊಡ್ಡಬಲ್ಲವು ಹಾಗೂ ಗಟ್ಟಿನಿದ್ರೆಯ ಅವಧಿಯನ್ನೂ ಕಡಿತಗೊಳಿಸಬಲ್ಲುದಂತೆ. ಹೀಗಂತ ಅಧ್ಯಯನವೊಂದು ಹೇಳುತ್ತದೆ. ಮತ್ತಷ್ಟು ಓದಿ

ಇಬ್ಬರು ಪುರುಷರ ಚರ್ಮ ಕೋಶಗಳಿಂದ ಅಮೆರಿಕ ವಿಜ್ಞಾನಿಗಳು ಮೊದಲ ಬಾರಿಗೆ ತದ್ರೂಪಿ ಮಾನವ ಭ್ರೂಣವನ್ನು ಸೃಷ್ಟಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಬಳಕೆಯಾಗಬಲ್ಲ ವೈಯಕ್ತೀಕೃತ ಭ್ರೂಣದ ಕೋಶ (ಸ್ಟೆಮ್ ಸೆಲ್)ಗಳನ್ನು ರಚಿಸಲು ಸಾಧ್ಯ ಎಂಬ ವಾದಕ್ಕೆ ಪೂರಕವಾಗಿ ಇದೊಂದು ಮಹತ್ವದ ಹೆಜ್ಜೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮತ್ತಷ್ಟು ಓದಿ

ಕಾವೇರಿಯಿಂದಮಾ ಗೋದಾವರಿ ವರಮಿರ್ಪ ನಾಡದಾ ಕನ್ನಡದೊಳ್‌ ಭಾವಿಸಿದ ಜನಪದಂ ವಸು ಧಾವಲಯ ವಿಲೀನ ವಿಶದ ವಿಷಯ ವಿಶೇಷಂ।। ಕವಿ ಶ್ರೀವಿಜಯ ಮತ್ತು ರಾಜಾ ನೃಪತುಂಗ ಇಬ್ಬರೂ ಸೇರಿ ರಚಿಸಿದ ಕವಿರಾಜ ಮಾರ್ಗದಲ್ಲಿ ಈ ಕಂದಪದ್ಯ ರೂಪದ ಹೊನ್ನುಡಿಯ ಉಲ್ಲೇಖವಿದೆ. ಮತ್ತಷ್ಟು ಓದಿ